ಸಾರ್ಸ್-ಕೋವ್ ಮತ್ತು ಸಾರ್ಸ್-ಕೋವ್-೨ ವೈರಸ್‍ಗಳು( () ) ವಿಶ್ವದ ಬಹಳಷ್ಟು ದೇಶಗಳ ಜನಸಂಖ್ಯೆಯ ಮೇಲೆ ಪರಿಣಾಮವನ್ನು ಬೀರಿದೆ. ೨೦೦೨ರ ಸಾರ್ಸ್-ಕೋವ್ ವೈರಸ್ ೨೦೦೨-೨೦೦೪ರ ಸಾರ್ಸ್ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಸಾರ್ಸ್-ಕೋವ್-೨ ವೈರಸ್ ೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಇದು ಆಧುನಿಕ ಇತಿಹಾಸದಲ್ಲಿ ಘೋಷಿಸಲ್ಪಟ್ಟ ಮೊದಲ ಸಾರ್ಸ್ ವೈರಸ್ ಸಾಂಕ್ರಾಮಿಕವಾಗಿದೆ. ಕೊರೋನಾ ವೈರಸ್ ಸಾಂಕ್ರಾಮಿಕವು ಹೆಚ್ಚು ವಿನಾಶಕಾರಿಯಾಗಿದ್ದು ಹಲವಾರು ದೇಶಗಳ ಆರ್ಥಿಕ ಬೆಳೆವಣಿಗೆಯ ಜೊತೆಗೆ ಸಾಮಾಜಿಕ ಹಾಗೂ ಶಿಕ್ಷಣಕ್ಕೆ ಕೆಡುಕುಂಟುಮಾಡುವ ಪರಿಣಾಮವನ್ನು ಬೀರಿದೆ. == ೨೦೦೨-೨೦೦೪ರ ಸಾರ್ಸ್ ವೈರಸ್‌ == ೨೦೦೨-೨೦೦೪ರ ಸಾರ್ಸ್ ವೈರಸ್ ತೀವ್ರವಾದ ಉಸಿರಾಟದ ಸಿಂಡ್ರೋಮ್ (ಸಾರ್ಸ್) ಒಳಗೊಂಡ ಸಾಂಕ್ರಾಮಿಕ ರೋಗವನ್ನು ಉಂಟುಮಾಡಿದೆ. ಈ ಸಾಂಕ್ರಾಮಿಕ ರೋಗವು ನವೆಂಬರ್ ೨೦೦೨ ರಲ್ಲಿ ಚೀನಾದ ಫೋಶಾನ್‌ ನಗರದಲ್ಲಿ ಹುಟ್ಟಿಕೊಂಡಿತು. ೮೦೦೦ರಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದರು ಮತ್ತು ವಿಶ್ವದಾದ್ಯಂತ ಕನಿಷ್ಠ ೭೭೪ ಜನರು ಸಾವನ್ನಪ್ಪಿದ್ದಾರೆ. == ೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕ == ತೀವ್ರ ಉಸಿರಾಟದ ತೊಂದರೆಯ ಕೊರೊನಾವೈರಸ್-೨ (ಸಾರ್ಸ್-ಕೋವ್-2)ಡಿಸೆಂಬರ್ ೨೦೧೯ರಲ್ಲಿ ಚೀನಾದ ವೂಹಾನ್ ನಲ್ಲಿ ಮೊದಲು ಪತ್ತೆಯಾಯಿತು. ಮಾರ್ಚ್ ೧೧, ೨೦೨೦ರಂದು ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ಸಾಂಕ್ರಾಮಿಕ ರೋಗವೆಂದು ಗುರುತಿಸಿದೆ.ಏಪ್ರಿಲ್ ೪ರ ವರದಿಯಂತೆ ೨೧೦ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ೧,೧೦೦,೦೦೦ ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರ ಪರಿಣಾಮವಾಗಿ ೫೯,೦೦೦ಕ್ಕೂ ಹೆಚ್ಚು ಸಾವುಗಳು ಮತ್ತು ೯೪,೦೦೦ ಚೇತರಿಕೆಗಳು ಕಂಡುಬಂದಿವೆ. == ಹೋಲಿಕೆ == == ಉಲ್ಲೇಖಗಳು ==